Dr. T.M.A. Pai Foundation, Manipal

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ, ಉಡುಪಿ

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯವು ಕರ್ನಾಟಕದ ಅತ್ಯಂತ ಹಳೆಯ ಕಾನೂನು ಕಾಲೇಜುಗಳಲ್ಲಿ ಒಂದಾಗಿದ್ದು ಕಾನೂನು ಶಿಕ್ಷಣದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಹಾಗೂ ಐದು ವರ್ಷಗಳ ಕಾನೂನು ಪರೀಕ್ಷೆಗಳಲ್ಲಿ ಅತೀ ಹೆಚ್ಚಿನ ರ್ಯಾಂಕುಗಳನ್ನು ಗಳಿಸಿದ ಹೆಗ್ಗಳಿಕೆ ಈ ಸಂಸ್ಥೆಯದು.

ಕರ್ನಾಟಕ ರಾಜ್ಯ ಕಾನೂನು ವಿಶವಿದ್ಯಾಲಯಕ್ಕೆ ಸಂಯೋಜಿತಗೊಂಡ 87 ಕಾನೂನು ಕಾಲೇಜುಗಳಲ್ಲಿ ಕಳೆದ ಅಂತಿಮ ಪರೀಕ್ಷೆಯಲ್ಲಿ ಮೂರು ವರ್ಷದ ಕಾನೂನು ಕೋರ್ಸಿನಲ್ಲಿ ಮೊದಲ ರ್ಯಾಂಕ್ ಹಾಗೂ ಐದು ವರ್ಷದ ಕಾನೂನು ಕೋರ್ಸಿನಲ್ಲಿ 9ನೇ ರ್ಯಾಂಕನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಗಳಿಸಿರುವುದು ಈ ಸಂಸ್ಥೆಯು ಶೈಕ್ಷಣಿಕ ರಂಗದಲ್ಲಿ ಸಾಧಿಸಿರುವ ಔನತ್ಯಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನ ವರ್ಧನೆಯ ಜೊತೆ ಜೊತೆಗೆ ವಿಧ್ಯಾರ್ಥಿಗಳ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ಕೂಡಾ ಶ್ರಮಿಸುವುದು ಈ ಸಂಸ್ಥೆಯ ಗುರಿಯಾಗಿದೆ.

ನಮ್ಮ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ

ನಮ್ಮ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಇವರು ಮಣಿಪಾಲದ ಸ್ಥಾಪಕ ಹಾಗೂ ಶಿಲ್ಪಿಯಷ್ಟೇ ಆಗಿರದೇ ಭಾರತದಲ್ಲಿ ಶಿಕ್ಷಣ ರಂಗದ ಪಿತಾಮಹನೆನಿಸಿಕೊಂಡಿದ್ದಾರೆ. ಮಹಾನ್ ದೃಷ್ಟಾರನಾಗಿ, ಮಾನವತೆಯ ಮೂರ್ತಿಯಾಗಿ, ಸ್ಪೂರ್ತಿಯ ನಿರಂತರ ಚಿಲುಮೆಯಾಗಿ, ಘನತೆಯ ಅವತಾರವಾಗಿ, ಸರಳತೆಯ ರೂಪವಾಗಿ, ಕಾಲದ ಉಸುಕಿನಲ್ಲಿ ತನ್ನ ಹೆಜ್ಜೆ ಗುರುತನ್ನು ಶಾಶ್ವತವಾಗಿ ಮೂಡಿಸಿದ ಮಹಾನ್ ಚೇತನವಾಗಿ ಪರರ ಏಳಿಗೆಯಲ್ಲಿ ತನ್ನ ಏಳಿಗೆಯನ್ನು ಸಾಧಿಸಿದ ಮಹಾ ಪುರುಷ ಡಾ.ಟಿ.ಎಂ.ಎ.ಪೈ.

Self Study Report for NAAC Accreditation

Download the SSR For 2014-15

Annual Quality Assurance Report (AQAR)

Download the AQAR for 2016-17

Dr. T.M.A. Pai

ಪದ್ಮಶ್ರೀ ಡಾ.ಟಿ.ಎಂ.ಎ.ಪೈ

“ ಶಿಕ್ಷಣವೆಂದರೆ ಕೇವಲ ವ್ಯಕ್ತಿಗಳನ್ನು ಒಟ್ಟು ಗೂಡಿಸಿ ಮಾಹಿತಿಯನ್ನು ತುಂಬುವುದಲ್ಲ, ಚಾರಿತ್ರ್ಯವನ್ನು ಬೆಳೆಸುವ ಪ್ರಕ್ರಿಯೆ ಇದಾಗಿದ್ದು, ಇದಕ್ಕೆ ಹೆಚ್ಚಿನ ಗಮನ ನೀಡಬೇಕು. ”

ಪ್ರವೇಶಾತಿ ಅರ್ಜಿ

2018-19ನೇ ವರ್ಷಕ್ಕೆ ಪ್ರವೇಶಾತಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಳ್ಳಿ.

ಡೌನ್‍ಲೋಡ್

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕುಂದು ಕೊರತೆ ನಿವಾರಣಾ ಕೋಶ.

ಕುಂದು ಕೊರತೆಗಳ ಬಗ್ಗೆ ನಿಮ್ಮ ದೂರನ್ನು ನೀಡಿ.