Dr. T.M.A. Pai Foundation, Manipal

ಇತಿಹಾಸ

1957ರಲ್ಲಿ ಒಂದು ಸಣ್ಣ ತಾಲೂಕು ಕೇಂದ್ರವಾಗಿದ್ದ ಉಡುಪಿಯಲ್ಲಿ ಗುಣಾತ್ಮಕ ಕಾನೂನು ಶಿಕ್ಷಣವನ್ನು ನೀಡುವ ಉದಾತ್ತ ದ್ಯೇಯದೊಂದಿಗೆ ಡಾ.ಟಿ.ಎಂ.ಎ.ಪ್ರತಿಷ್ಟಾನದಿಂದ ಸ್ಥಾಪಿತವಾದ ಉಡುಪಿ ಕಾನೂನು ಕಾಲೇಜು ಕಾಲಾಂತರದಲ್ಲಿ ಅಂದಿನ ಮೈಸೂರು ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಶ್ರೇಷ್ಟ ಮುತ್ಸದ್ಧಿ ಶ್ರೀ.ವೈಕುಂಠ ಬಾಳಿಗಾರವರ ಹೆಸರಿನಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜು ಎಂದು ಮರು ನಾಮಕರಣಗೊಂಡು ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಸೀಮೊಲ್ಲಂಘನ ಮಾಡಿ, ತನ್ನ ಯಶೋಗಾಥೆಯನ್ನು ಬರೆಯಿತು. ಈ ಕಾಲೇಜು ಇಂದು ಭಾರತದಿಂದಷ್ಟೇ ಅಲ್ಲದೇ ವಿದೇಶದಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ಎಂಬುದು ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಯವರ ದೂರದರ್ಶಿತ್ವ ಹಾಗೂ ದೃಡತೆಗೆ ಸಾಕ್ಷಿಯಾಗಿದೆ.

ಕಾಲೇಜು ತನ್ನ ಪ್ರಾರಂಭದ ದಿನಗಳಿಂದ ಒಂದು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ದಾಪುಗಾಲು ಹಾಕಿದೆ. ತನ್ನ ಸಾರ್ಥಕ ಹಾಗೂ ನಿರಂತರ ಅಸ್ತಿತ್ವದ ದ್ಯೋತಕವಾಗಿ 1982-83ರಲ್ಲಿ ರಜತ ಮಹೋತ್ಸವದ ಹಾಗೂ 2006-07ರಲ್ಲಿ ಸುವರ್ಣ ಮಹೋತ್ಸವವನ್ನು ಹಾಗೂ 2016-17ರಲ್ಲಿ ವಜ್ರ ಮಹೋತ್ಸವವನ್ನು ತನ್ನ ಭವ್ಯ ಪರಂಪರೆಯಿಂದ ಮೂಡಿದ ಆತ್ಮ ವಿಶ್ವಾಸದಿಂದ ಆಚರಿಸಿಕೊಂಡಿತು.

ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಗತ್ಯ ಸೇವೆ ಸಲ್ಲಿಸಿ, ಈ ವಿದ್ಯಾ ಸಂಸ್ಥೆಯು ತನ್ನದೇ ಆದ ಒಂದು ಸ್ಥಾನವನ್ನು ಕಲ್ಪಿಸಿಕೊಂಡಿದೆ. ಈ ಕಾಲೇಜಿನಲ್ಲಿ ಶಿಕ್ಷಣ ಕೈಗೊಂಡ ಕಾನೂನು ಪದವೀಧರರು ಇಂದು ನ್ಯಾಯಾಂಗ ಸರ್ಕಾರ ಹಾಗೂ ವಿವಿಧ ಕಂಪನಿಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.