Dr. T.M.A. Pai Foundation, Manipal

ಪ್ರಾಂಶುಪಾಲರ ಸಂದೇಶ

Prof. Prakash Kanive

ಶಿಕ್ಷಣ ಸಂಸ್ಥೆಗಳು ಒಂದು ದೇಶದ ಆಸ್ತಿ ಹಾಗೂ ಪರಂಪರೆಯಾಗಿದ್ದು, ಒಂದು ಮಹಾನ್ ದೇಶವು ತನ್ನ ಶಿಕ್ಷಣ ಸಂಸ್ಥೆಗಳು ಒದಗಿಸಿದ ಭದ್ರ ಬುನಾದಿಯ ಮೇಲೆ ನಿಂತಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಶ್ರೇಷ್ಟ ಗುಣಗಳು ಹೊರ ಹೊಮ್ಮಲು ಮೌಲ್ಯಾಧಾರಿತ ಶಿಕ್ಷಣವು ಅತ್ಯಗತ್ಯ. ಶಿಕ್ಷಣ ನೀಡಿಕೆಯು ಕೇವಲ ವ್ಯಕ್ತಿಗಳನ್ನು ಶಿಕ್ಷಿತರನ್ನಾಗಿಸುವ ಪ್ರಕ್ರಿಯೆಯಾಗಿ ಉಳಿಯದೇ, ಜನತೆಯ ಕಲ್ಯಾಣಕ್ಕಾಗಿ ಬಳಸುವ ಜ್ಞಾನದ ಅರ್ಜನೆಯ ಮಾರ್ಗವಾಗಬೇಕು. ಇಂದು ಜನತೆಯು ಅನುಭವಿಸುತ್ತಿರುವ ಹಲವಾರು ಪಿಡುಗುಗಳನ್ನು ಮೌಲ್ಯಾಧಾರಿತ ಶಿಕ್ಷಣದಿಂದ ನಿವಾರಿಸಲು ಸಾಧ್ಯ. ದೇಶದ ನೈತಿಕ ಎಳೆಗಳು ಗಟ್ಟಿಗೊಳ್ಳುವಂತೆ ಮಾಡುವ ನೈತಿಕ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕಾನೂನಿನ ಶಿಕ್ಷಣವು ದೇಶದ ರಚನಾತ್ಮಕ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಜನತೆಯಲ್ಲಿ ಕಾನೂನಿನ ಅರಿವನ್ನು ಮೂಡಿಸುವ ಕರ್ತವ್ಯ ನ್ಯಾಯವಾದಿಗಳ ಮೇಲಿದೆ.

ಪ್ರಜೆಗಳು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತುಕೊಳ್ಳುವಂತೆ ಮಾಡಬೇಕಾಗಿದೆ. ಯಾವುದೇ ಸುಸಂಸ್ಕೃತ ನಾಗರೀಕ ದೇಶದ ಹೆಗ್ಗುರುತು ಆ ದೇಶದಲ್ಲಿ ಆಗುತ್ತಿರುವ ಕಾನೂನಿನ ಪಾಲನೆಯಲ್ಲಿದೆ.

ಸಿಸಿರೋ ಹೇಳುವಂತೆ ನಮ್ಮ ಸ್ವಾತಂತ್ರಕ್ಕಾಗಿ ನಾವು ಕಾನೂನಿನ ಗುಲಾಮರಾಗಿದ್ದೇವೆ. ವಕೀಲಿ ವೃತ್ತಿಯು 21ನೇ ಶತಮಾನದಲ್ಲಿ ಹೆಚ್ಚು ಹೆಚ್ಚು ಪಂಥಾಹ್ವಾನಕ್ಕೆ ಎಡೆಮಾಡಿಕೊಟ್ಟು ಹೊಸ ಆಯಾಮಗಳನ್ನು ಸೃಷ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಜಾಗತೀಕರಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಗಾದ ಪ್ರಗತಿ. ಈ ಹೊಸ ಪಂಥಾಹ್ವಾನವನ್ನು ಸಮರ್ಥವಾಗಿ ಸ್ವೀಕರಿಸಲು ಕಾನೂನು ವಿದ್ಯಾರ್ಥಿಗಳು ವಕೀಲಿ ವೃತ್ತಿಯ ಕೌಶಲ್ಯಗಳನ್ನು ಕಲಿತುಕೊಳ್ಳುವುದು ಇಂದಿನ ಅಗತ್ಯವಾಗಿದೆ. ನಾನು ನನ್ನ ಎಲ್ಲಾ ವಿಧ್ಯಾರ್ಥಿಗಳಿಗೆ ಭವ್ಯ ಭವಿಷ್ಯವನ್ನು ಹಾಗೂ ಅವರ ಜೀವನದ ಎಲ್ಲಾ ರಂಗಗಳಲ್ಲಿ ಯಶಸ್ಸನ್ನು ಹಾರೈಸುತ್ತೇನೆ.

ಪ್ರೊ. ಪ್ರಕಾಶ್ ಕಣಿವೆ
ಪ್ರಾಂಶುಪಾಲರು

“ 21ನೇ ಶತಮಾನದ ಅಶಿಕ್ಷಿತರೆಂದರೆ ಓದು ಬರಹ ಅರಿಯದವರಲ್ಲ. ಬದಲಿಗೆ ಯಾರು ಕಲಿಯುವುದಿಲ್ಲವೋ, ಕಲಿತ ಅಪ್ರಸ್ತುತ ವಿಷಯಗಳನ್ನು ಮೂಲೆಗೆ ಒತ್ತುವುದಿಲ್ಲವೋ, ಪುನಃ ಕಲಿಯುವುದಿಲ್ಲವೋ ಅವರೇ ಅಶಿಕ್ಷಿತರು. ”
— ಆಲ್ವಿನ್ ಟೊಫ್ಲರ್